ಕಲ್ಯಾಣಿ ಚಾಲುಕ್ಯರ ನಾಡಲ್ಲಿ ಮೌಂಟನ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಆರಂಭ - MLA basavanagouwda patil yatnal
ಸೈಕ್ಲಿಸ್ಟ್‌ಗಳ ತವರೂರು ವಿಜಯಪುರದಲ್ಲಿ ಇಂದಿನಿಂದ ಆರಂಭಗೊಂಡಿರುವ ಮೌಂಟನ್ ಸೈಕ್ಲಿಂಗ್ ಚಾಂಪಿಯನ್ ಶಿಪ್‌ಗೆ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸೈಕಲ್ ಓಡಿಸುವ ಮೂಲಕ ಚಾಲನೆ ನೀಡಿದರು. ನಗರದ ಬಿಎಲ್ ಡಿಇ ಹೊಸ ಕ್ಯಾಂಪಸ್ ಹಿಂಬದಿ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ. ಕಾರ್ಯಕ್ರಮಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೈರಾಗಿದ್ದು, ಶಾಸಕ ದೇವಾನಂದ ಚವ್ಹಾಣ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಇನ್ನೇನು ಸ್ಪರ್ಧೆ ಆರಂಭವಾಗಬೇಕು ಎನ್ನುವುದರೊಳಗೆ ಮಳೆ ಸುರಿದ ಕಾರಣ ಕೆಲ ಹೊತ್ತು ಸ್ಪರ್ಧೆ ನಿಲ್ಲಿಸಬೇಕಾಯಿತು.