ಮರಿ ಆನೆಯನ್ನು ತಡೆಗೋಡೆ ಹತ್ತಿಸಿದ ಅಮ್ಮ... ಮುದ್ದಾದ ವಿಡಿಯೋ ನೋಡಿ - ಆನೆ ಮರಿ ವೈರಲ್ ವಿಡಿಯೋ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯಲು ತಾಯಿ ಕಲಿಸುವಂತೆ, ಮರಿಯಾನೆಯೊಂದಕ್ಕೆ ತಾಯಿ ಆನೆ ಗೋಡೆ ಹತ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಯಿಯನ್ನು ಹಿಂಬಾಲಿಸುವ ಮರಿಯಾನೆ ತಡೆಗೋಡೆ ಹತ್ತಲಾಗದೇ ಹಿಂದಕ್ಕೆ ಸರಿದು ಅತ್ತಿಂದಿತ್ತ ಪರದಾಡುತ್ತಿತ್ತು. ಈ ವೇಳೆ, ಕಂದನ ಅಸಹಾಯಕತೆ ಕಂಡು ಧಾವಿಸಿ ಬರುವ ತಾಯಿಆನೆ ಸೊಂಡಿಲು ಸಹಾಯದಿಂದ ತಡೆಗೋಡೆ ಹತ್ತಿಸಿ ಮೈದಡವಿ ತನ್ನೊಟ್ಟಿಗೆ ಕರೆದೊಯ್ಯುವ ದೃಶ್ಯವನ್ನು ತಮಿಳುನಾಡಿನ ಲಾರಿ ಚಾಲಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಆದರೆ, ಮರಿಯಾನೆಗೆ ಬಲತುಂಬುವ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಶೇರ್ ಆಗುತ್ತಿದ್ದು, ಎಲ್ಲರ ಮನಗೆದ್ದಿದೆ.