ಸತ್ತ ಮರಿ ಬದುಕಿಸಲು ಪರದಾಡಿತು.. ಈ ದೃಶ್ಯ ನಿಮ್ಮ ಕಣ್ಣಲ್ಲೂ ನೀರು ತರಿಸುತ್ತೆ.. ವಿಡಿಯೋ - ನಾಯಿ ಮರಿಯ ಸಾವಿಗೆ ದುಃಖ
ಕಲಬುರಗಿ:ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ತನ್ನ ಕಂದನ ಕಳ್ಕೊಂಡು ಸುಮಾರು 1 ಗಂಟೆ ಕಾಲ ನಾಯಿಯೊಂದು ನೋವು ಅನುಭವಿಸಿರೋ ಘಟನೆ ನಗರದ ಹೊರವಲಯದ ಆಳಂದ ಚೆಕ್‌ಪೋಸ್ಟ್ ಬಳಿ ನಡೆದಿದೆ. ಮೂರು ನಾಯಿ ಮರಿಗಳೊಂದಿಗೆ ತಾಯಿ ರಸ್ತೆ ದಾಟುವ ವೇಳೆ ವಾಹನ ಹರಿದು ನಾಯಿ ಮರಿ ಸಾವನ್ನಪ್ಪಿತ್ತು. ಈ ಘಟನೆಯಲ್ಲಿ ತಾಯಿ ನಾಯಿಗೂ ಕಾಲಿಗೆ ಗಾಯವಾಗಿದೆ. ಕಾಲು ನೋವಿನ ನಡುವೆಯೂ ತನ್ನ ಮರಿಯ ಸಾವಿಗೆ ದುಃಖಿಸಿದೆ. ತಾಯಿಯ ಈ ಕರುಣಾಜನಕ ಸ್ಥಿತಿ ನೋಡಲಾಗದ ಬೈಕ್ ಸವಾರನೊಬ್ಬ ನಾಯಿ ಮರಿಯನ್ನು ದಡಕ್ಕೆ ತಂದು ಹಾಕಿದ್ದಾನೆ. ಅಲ್ಲೂ ನಾಯಿಯ ರೋಧನೆ ಮುಂದುವರೆದಿತ್ತು.
TAGGED:
ನಾಯಿ ಮರಿಯ ಸಾವಿಗೆ ದುಃಖ