ಮರಿ ಹಕ್ಕಿಗೆ ತುತ್ತಿಕ್ಕುತ್ತಿರುವ ತಾಯಿ: ಕುತೂಹಲಕಾರಿ ವಿಡಿಯೋ ನೋಡಿ
ಹುಬ್ಬಳ್ಳಿಯಲ್ಲೊಂದು ಪಕ್ಷಿ ಆಹಾರವನ್ನು ತಂದು ತನ್ನ ಮರಿ ಹಕ್ಕಿಯ ಬಾಯಿಗೆ ನೀಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗಿದೆ. ಇದನ್ನು ತಾಲೂಕಿನ ಮಿಶ್ರಿಕೋಟಿಯ ಪಕ್ಷಿ ಪ್ರೇಮಿ ಈರಪ್ಪ ನಾಯ್ಕರ್ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ವಿಶ್ವ ತಾಯಂದಿರ ದಿನದ ಮಹತ್ವವನ್ನು ಈ ದೃಶ್ಯವೂ ಜಗತ್ತಿಗೆ ಸಾರಿ ಹೇಳುವಂತಿದೆ.