ಬೋರ್ವೆಲ್ ಕೊರೆಸುವಾಗ ಕಾರಂಜಿಯಂತೆ ಚಿಮ್ಮಿದ ಗಂಗೆ! - ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ
ಚಿತ್ರದುರ್ಗ:ಬೋರ್ವೆಲ್ ಕೊರೆಸುವಾಗ ಕಾರಂಜಿಯಂತೆ ಆಕಾಶಕ್ಕೆ ನೀರು ಚಿಮ್ಮಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ ಗ್ರಾಮದ ರಂಗಸ್ವಾಮಿ ಎಂಬುವರ ಜಮೀನಲ್ಲಿ ನಡೆದಿದೆ. ಈ ಹಿಂದೆ ಈ ಜಮೀನಿನಲ್ಲಿ 4 ಬೋರ್ವೆಲ್ಗಳು ವಿಫಲವಾಗಿದ್ದವು. ಆದರೆ ಈಗ ಬೋರ್ವೆಲ್ ಕೊರೆಸುತ್ತಿದ್ದಾಗಲೇ 20 ಅಡಿ ಎತ್ತರಕ್ಕೆ ನೀರು ಚಿಮ್ಮುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.