ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 3,200 ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ - ಬಂಟ್ವಾಳದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ
ಬಂಟ್ವಾಳ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ 75 ಕೋಟಿ ಸೂರ್ಯ ನಮಸ್ಕಾರ ನಿಮಿತ್ತ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 3,200 ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿದ್ದರು. ಸೂರ್ಯನ ಆಕಾರದಲ್ಲೇ ವಿದ್ಯಾರ್ಥಿಗಳು ಮಂತ್ರಸಹಿತ ನಮಸ್ಕಾರ ಮಾಡಿದರು. ಪ್ರಗತಿಪರ ಕೃಷಿಕ ಲಕ್ಷ್ಮೀನಾರಾಯಣ ಪರಾಡ್ಕರ್ ಧ್ವಜಾರೋಹಣ ನೇರವೇರಿಸಿದರು. ಈ ವೇಳೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಡಾ. ಕಮಲಾ ಪ್ರ.ಭಟ್, ಆಡಳಿತ ಮಂಡಳಿ ಸದಸ್ಯರು, ವಿಭಾಗ ಪ್ರಮುಖರು, ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರು.