ಸಾವಿರದ ಗಡಿ ದಾಟಿದ ಗಣಿ ಜಿಲ್ಲೆ ಕೊರೊನಾ ಸೋಂಕಿತರ ಸಂಖ್ಯೆ - Bellary Corona infection
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಈವರೆಗೂ ಅಂದಾಜು 1,118 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜಿಂದಾಲ್ ಒಂದರಲ್ಲೇ ಕೇವಲ 450 ಮಂದಿಗೆ ಸೋಂಕು ತಗುಲಿದೆ. ನಿನ್ನೆ ಒಂದೇ ದಿನದಲ್ಲಿ ಹೊಸದಾಗಿ 99 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. 503 ಮಂದಿ ಗುಣಮುಖರಾಗಿದ್ದಾರೆ. 581 ಸಕ್ರಿಯ ಪ್ರಕರಣಗಳಿವೆ.