ಮನೆಯಲ್ಲಿ 35ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆ - water snake chicks
ಗದಗ: ಮನೆಯ ಆವರಣದಲ್ಲಿ 35ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆಯಾದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ವಿದ್ಯಾಗಿರಿಯಲ್ಲಿ ನಡೆದಿದೆ. ಕಮಲಾಕ್ಷಿ ಕುಲಕರ್ಣಿ ಎಂಬುವರ ಮನೆಯಲ್ಲಿ ಅಪರೂಪದ ಹಾವಿನ ಮರಿಗಳು ಪತ್ತೆಯಾಗಿದ್ದು, ಹಾವಿನ ಮರಿಗಳನ್ನು ಕಂಡ ಮನೆಯ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಬಿ.ಆರ್. ಸುರೇಬಾನ ಹಾವಿನ ಮರಿಗಳ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.