ಒಂದೇ ಊರಲ್ಲಿ ಮಳೆಗೆ 30ಕ್ಕೂ ಹೆಚ್ಚು ಮನೆಗಳು ಕುಸಿತ: ಜನರ ಗೋಳು ಕೇಳುತ್ತಿಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು - ಹಾವೇರಿ ತಾಲೂಕಿನಲ್ಲಿ ಮಳೆಗೆ ಮನೆಗಳು ಬಿದ್ದರು ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ
ಹಾವೇರಿ ತಾಲೂಕಿನ ಹಂದಿಗನೂರಿನಲ್ಲಿ ಪ್ರಸ್ತುತ ವರ್ಷದ ಮಳೆಗೆ 30ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಕೆಲವೊಂದು ಮನೆಗಳು ಬಹತೇಕ ಬಿದ್ದಿದ್ದು ಅವುಗಳಲ್ಲಿ ಜನ ಜೀವಭಯದಿಂದ ವಾಸಿಸುತ್ತಿದ್ದಾರೆ. ಮನೆಗಳು ಧರೆಗುರುಳಿದ್ದರು ಯಾವುದೇ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಭೇಟಿ ನೀಡದಿರುವುದು ಗ್ರಾಮಸ್ಥರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಮಳೆಗೆ ಬಿದ್ದಿರುವ ಮನೆಗಳಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ವಿತರಿಸುವಂತೆ ಜನರು ಆಗ್ರಹಿಸಿದ್ದಾರೆ.