150ಕ್ಕೂ ಹೆಚ್ಚು ಭಕ್ತರಿಂದ ಶ್ರೀಶೈಲಕ್ಕೆ ಗೋಕಾಕ್ನಿಂದ ಪಾದಯಾತ್ರೆ - ಭಕ್ತಾದಿಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಮೃತ್ಯುಂಜಯ ಸರ್ಕಲ್ನ ಮಾಹಾಂತೇಶ ಕ್ಲಿನಿಕ್ ಹತ್ತಿ, ಸಾವಳಗಿ, ಖಾನಾಪುರ, ಮೂತ್ತನಾಳ, ನಂದಗಾವ ಗ್ರಾಮದವರು ಸುಮಾರು 670 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಶ್ರೀಶೈಲ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಭಕ್ತಾದಿಗಳಿಗೆ ರಸ್ತೆ ಮಧ್ಯೆ ಹೂವಿನ ಮಾಲೆ ಹಾಕುವ ಮೂಲಕ ಸುರಕ್ಷಿತವಾಗಿ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆದು ಮರಳಿ ಮನೆಗಳಿಗೆ ಬನ್ನಿ ಎಂದು ಹಾರೈಸಲಾಯಿತು. ಇನ್ನು ಶ್ರೀಶೈಲಕ್ಕೆ 150ಕ್ಕೂ ಹೆಚ್ಚು ಜನ ಮಹಿಳೆಯರು ಹಾಗೂ ಮಕ್ಕಳು ಹೋಗುತ್ತಿದ್ದು, 15ಕ್ಕೂ ಹೆಚ್ಚು ದಿನಗಳ ಕಾಲ ಪಾದಯಾತ್ರೆ ಮಾಡಲಾಗುತ್ತದೆ ಎಂದು ಭಕ್ತರು ತಿಳಿಸಿದರು. ಇನ್ನು ಶ್ರೀಶೈಲಕ್ಕೆ ಹೋಗುತ್ತಿರುವ ಭಕ್ತರಿಗೆ ಊಟ, ನೀರು, ತಂಪು ಪಾನೀಗಳ ವ್ಯವಸ್ಥೆಯನ್ನು ಸುತ್ತಮುತ್ತಲಿನ ಗ್ರಾಮದ ಜನರು ಮಾಡಿದ್ದಾರೆ.