ಕಾರವಾರದಲ್ಲಿ ಹೆಜ್ಜೇನು ದಾಳಿ : ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ತ - ಕಾರವಾರದಲ್ಲಿ ಹೆಜ್ಜೇನು ದಾಳಿ
ಕಾರವಾರ : ಹೆಜ್ಜೇನು ದಾಳಿಯಿಂದಾಗಿ ಹತ್ತಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕುಮಟಾ ತಾಲೂಕಿನ ಹಿಂಡಬೈಲ್ ಗ್ರಾಮದಲ್ಲಿ ನಡೆದಿದೆ. ಸಂತೆಗುಳಿ ಗ್ರಾಪಂ ವ್ಯಾಪ್ತಿಯ ಹಿಂಡಬೈಲ್ ಬಳಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿವೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಕೆಲವರು ದಿಕ್ಕಾಪಾಲಾಗಿ ಓಡಿದ್ದು, ಹತ್ತಕ್ಕೂ ಹೆಚ್ಚು ಜನರಿಗೆ ಜೇನು ಹುಳುಗಳು ಕಚ್ಚಿವೆ. ಗಾಯಾಳುಗಳನ್ನು ಸಂತೇಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಗಂಭೀರಗೊಂಡವರನ್ನು ಕುಮಟಾ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.