ಕರ್ನಾಟಕ

karnataka

ETV Bharat / videos

ದ.ಕನ್ನಡ ಜಿಲ್ಲೆಯಲ್ಲಿ ರ್‍ಯಾಂಡಮ್ ಟೆಸ್ಟ್​​​ನಲ್ಲಿ ಹೆಚ್ಚು ಕೊರೊನಾ ಪ್ರಕರಣ ಪತ್ತೆ - ಮಂಗಳೂರು ಹೆಚ್ಚು ಕೊರೊನಾ ಪ್ರಕರಣ ಪತ್ತೆ ಸುದ್ದಿ

By

Published : Jul 6, 2020, 10:13 AM IST

ದ.ಕ ಜಿಲ್ಲೆಯಲ್ಲಿ ರ್‍ಯಾಂಡಮ್ ಟೆಸ್ಟ್ ನಲ್ಲಿ ಕೊರೊನಾ ಪ್ರಕರಣ ಹೆಚ್ಚು ಪತ್ತೆಯಾಗುತ್ತಿರುವುದು ಸಮುದಾಯಕ್ಕೆ ಹಬ್ಬಿದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ‌. ಜಿಲ್ಲೆಯಲ್ಲಿ ಕೊರೊನಾ ಉಳ್ಳಾಲ ಭಾಗದಲ್ಲಿ ಸಮುದಾಯಕ್ಕೆ ಹಬ್ಬಿದೆ ಎಂಬುದಕ್ಕೆ ರ್‍ಯಾಂಡಮ್ ಟೆಸ್ಟ್ ನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದು ಪುಷ್ಟಿ ನೀಡಿದೆ. ಜಿಲ್ಲೆಯಲ್ಲಿ ನಿನ್ನೆ 147 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 48 ಪ್ರಕರಣಗಳು ರ್‍ಯಾಂಡಮ್ ಟೆಸ್ಟ್ ನಿಂದ ಎಂಬುದು ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ 40 ಐಎಲ್ಐ, 2 ಸಾರಿ ಕಾರಣದಿಂದ ಕೊರೊನಾ ಪತ್ತೆಯಾಗಿದೆ. 35 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಪತ್ತೆಯಾಗಿತ್ತು. ದ.ಕ ಜಿಲ್ಲೆಯಲ್ಲಿ ಈವರೆಗೆ 1242 ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ 554 ಮಂದಿ ಗುಣಮುಖರಾಗಿದ್ದಾರೆ. 666 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details