ಲಾಕ್ಡೌನ್ ಸಡಿಲಿಕೆ ನಂತರ ಭಕ್ತರ ಆಗಮನ... ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಲವಲವಿಕೆ - ಆಹಾರ ಸಿಗದೆ ಕಂಗಲಾಗಿದ್ದ ಕೋತಿಗಳು
ಲಾಕ್ಡೌನ್ ನಿಂದ ಕಳೆದ ಎರಡೂವರೆ ತಿಂಗಳು ಆಹಾರ ಸಿಗದೆ ಕಂಗಲಾಗಿದ್ದ ಕೋತಿಗಳು ಲಾಕ್ಡೌನ್ ಸಡಿಲಿಕೆಯ ನಂತರ ಲವಲವಿಕೆಯಿಂದ ಓಡಾಡುತ್ತಿವೆ. ಭಕ್ತರು ಚಾಮುಂಡಿ ಬೆಟ್ಟಕ್ಕೆ ಬರಲು ಶುರು ಮಾಡಿದಾಗಿನಿಂದ ಬೆಟ್ಟದಲ್ಲಿ ಇರುವ ಕಪಿಗಳು ಚೇಸ್ಟೆಯನ್ನು ಆರಂಭಿಸಿವೆ. ಭಕ್ತರು ದೇವರ ದರ್ಶನ ಪಡೆದು ದೇವಾಲಯದಿಂದ ಹೊರಬಂದ ನಂತರ ದೇವಾಲಯದ ಮೇಲೆ ಕೋತಿಗಳ ಚೇಸ್ಟೆಯನ್ನು ನೋಡಿ ಖುಷಿಪಡುತ್ತಾರೆ.