ಈ ಹೊತ್ತಿಗೆ ಬಾದಾಮಿ ಹಾಲು ಸಿಕ್ತು, ಮುಂದೇನು ಕಥೆ? ಹೀಗೂ ಅನಿಸಿತಾ ಮಂಗನ ಮನಸ್ಸಿಗೆ? - ರಾಯಚೂರು ಲಾಕ್ಡೌನ್
ಲಾಕ್ಡೌನ್ ಕರಿನೆರಳು ಪ್ರಾಣಿಗಳನ್ನು ಆವರಿಸಿದ್ದು ಹಸಿವಿನಿಂದ ಯಾರಾದರೂ ತಿನ್ನಲೂ ಆಹಾರ ನೀಡುತ್ತಾರಾ ಎಂದು ನೋಡುವಂತಾಗಿದೆ. ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದ ಬಸವೇಶ್ವರ ಸರ್ಕಲ್ನ ಅಪರ್ಣ ಚಿತ್ರದಂದಿರದ ಬಳಿ ಮಂಗವೊಂದು ಹಸಿವಿನಿಂದ ಆಹಾರಕ್ಕಾಗಿ ಹುಡುಕುತ್ತಿತ್ತು. ಯಾರೋ ತಿಂದು ಬಿಟ್ಟಿದ್ದ ಪ್ಲಾಸ್ಟಿಕ್ ಚೀಲವನ್ನು ಹೆಕ್ಕಿ ನೋಡಿತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸದ್ಯ ಇದನ್ನ ಕಂಡು ಸ್ಥಳಿಯರು ಬಾದಾಮಿ ಹಾಲು ನೀಡಿ ಅದರ ಹಸಿವು ನೀಗಿಸಿದ್ದಾರೆ... ಆದ್ರೆ ಉಳಿದ ದಿನಗಳ ಕತೆ ಏನು ಎನ್ನುವಂತೆ ಮಂಗ ಚಿಂತೆಯಲ್ಲಿ ಮುಳುಗಿತ್ತು.