ಕೋತಿಗಳ ಕಾಟಕ್ಕೆ ಬೇಸತ್ತ ರಾಯಚೂರು ಜನತೆ... ಸೆರೆಹಿಡಿಯುವಂತೆ ಒತ್ತಾಯ - ಕೋತಿಗಳ ಕಾಟ
ರಾಯಚೂರು: ನಿತ್ಯ ಕೋತಿಗಳ ಕಾಟದಿಂದ ಜಿಲ್ಲೆಯ ಸಿರವಾರ ಪಟ್ಟಣದ ಜನತೆ ತತ್ತರಿಸಿದ್ದಾರೆ. ಪಟ್ಟಣದಲ್ಲಿ ನಿತ್ಯ ನೂರಾರು ಕೋತಿಗಳು ದಂಡು ಕಾಣಿಸಿಕೊಳ್ಳುತ್ತಿದ್ದು, ಮಹಡಿಯಿಂದ ಮನೆಯೊಳಗೆ ನುಗ್ಗಿ ಮನೆಯಲ್ಲಿನ ವಸ್ತುಗಳನ್ನು ಹಾಳು ಮಾಡುತ್ತಿವೆ. ಹೀಗಾಗಿ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳ ಸೆರೆ ಹಿಡಿಯುವ ಅವುಗಳ ಕಾಟವನ್ನ ತಪ್ಪಿಸುವಂತೆ ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ.