ಅಮ್ಮ ಬಿಟ್ಟುಹೊಗಬೇಡಮ್ಮಾ!: ತಾಯಿ ಕೋತಿ ತಬ್ಬಿಕೊಂಡ ಮರಿಕೋತಿ ಕಂಡು ಜನರ ಕಣ್ಣೀರು!! - ಕೊಪ್ಪಳದ ಭಾಗ್ಯನಗರ
ಕೊಪ್ಪಳ: ಮೃತ ತಾಯಿ ಕೋತಿಯನ್ನು ಮರಿಯೊಂದು ತಬ್ಬಿಕೊಂಡು ಬಿಟ್ಟುಹೋಗಬೇಡ ಎಂದು ಹೇಳುತ್ತಿದೆಯೋ ಎನ್ನುವ ರೀತಿಯಲ್ಲಿ ವರ್ತಿಸಿ ನೋಡಿದವರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದೆ. ಜಿಲ್ಲೆಯ ಭಾಗ್ಯನಗರ ಪಟ್ಟಣದ ಶಾಸ್ತ್ರಿ ಬಡಾವಣೆಯಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಮೃತಪಟ್ಟಿತ್ತು. ಕೋತಿಯ ಅಂತ್ಯಸಂಸ್ಕಾರ ಮಾಡುವ ಹಿನ್ನೆಲೆ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಮೃತ ಕೋತಿ ಕಳೆಬರವನ್ನು ದರ್ಶನಕ್ಕೆ ಇಡಲಾಗಿತ್ತು. ಆದರೆ, ಮರಿ ಮಾತ್ರ ತಾಯಿ ಕೋತಿಯ ಕಳೆ ಬರವನ್ನು ಅಪ್ಪಿಕೊಂಡು ಹಾಲು ಕುಡಿಯಲು ಹಾತೊರೆಯುತ್ತಿತ್ತು. ಮೃತ ಕೋತಿಯಿಂದ ಮರಿ ಬಿಡಿಸಲು ಯುವಕರು ಪ್ರಯತ್ನಿಸಿದರೂ ಮರಿ ಕೋತಿ ಮಾತ್ರ ನನ್ನ ಬಿಟ್ಟುಹೋಗಬೇಡ ಎನ್ನುವಂತೆ ತಾಯಿ ಕೋತಿಯನ್ನು ಅಪ್ಪಿಕೊಳ್ಳುತ್ತಿದ್ದ ದೃಶ್ಯ ನಿಜಕ್ಕೂ ಮನಕಲಕುವಂತಿತ್ತು.