ಆಹಾ, ಓಹೋ.. ಚಾಲಾಕಿ ಕೋತಿ ಲಾಡು ತಿಂದಿದ್ದು ಹೀಗೆ.. ವಿಡಿಯೋ - ಕೋತಿ ಲಾಡು ತಿಂದ ವಿಡಿಯೋ
ಮೈಸೂರು: ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಚಾಲಾಕಿ ಕೋತಿಯೊಂದು ಭಕ್ತರನ್ನು ಅಡ್ಡಗಟ್ಟಿ ಅವರಿಂದ ಬಾಳೆಹಣ್ಣು, ಲಾಡನ್ನು ವಸೂಲಿ ಮಾಡಿತು. ಆದರೆ, ಲಾಡು ನೆಲದ ಮೇಲೆ ಇಟ್ಟು ಕಾಲಿನಿಂದ ಚೂರು ಮಾಡಿ ಲಾಡಿನಲ್ಲಿದ್ದ ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ಮಾತ್ರ ತಿಂದು ಅದರಲ್ಲಿದ್ದ ಬೂಂದಿಯನ್ನು ಅಲ್ಲೇ ಬಿಟ್ಟು ಹೊರಟು ಹೋಯಿತು. ಚಾಲಕಿ ಕೋತಿಯು ಲಾಡುವಿನ ಒಳಗಡೆ ಗೋಡಂಬಿ, ದ್ರಾಕ್ಷಿಯನ್ನು ಮಾತ್ರ ಆಯ್ದುಕೊಂಡು ತಿಂದ ವಿಡಿಯೋ ಈಟಿವಿ ಭಾರತ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೀವೂ ಈ ವಿಡಿಯೋ ನೋಡಿ..