ಅಧಿಕಾರಿಗಳ ನಿರ್ಲಕ್ಷ್ಯಕ್ಕೆಯೋಜನೆ ಬಲಿ: ಕಡಲ ಕಿನಾರೆ ಅಭಿವೃದ್ದಿಗೆ ಮಂಜೂರಾದ ಹಣ ವಾಪಸ್.. - 'ಸ್ವದೇಶಿ ದರ್ಶನ್' ಯೋಜನೆಯಡಿ ಮಂಜೂರಾಗಿದ್ದ ಹಣ ವಾಪಾಸ್
ಉತ್ತರ ಕನ್ನಡ ಅಂದ್ರೆ ನಮ್ಮ ನೆನಪಿಗೆ ಬರೋದು ಇಲ್ಲಿನ ಮೋಹಕ ಪ್ರವಾಸಿತಾಣಗಳು. ಅದರಲ್ಲೂ ಇಲ್ಲಿನ ಕಡಲ ತೀರಗಳು ಪ್ರವಾಸಿಗರಿಗೆ ಅಚ್ಚುಮೆಚ್ಚು. ಪ್ರವಾಸಿಗರನ್ನು ಇನ್ನಷ್ಟು ಸಳೆಯಲು ಕಡಲ ತೀರಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮೂರು ವರ್ಷಗಳ ಹಿಂದೆ "ಸ್ವದೇಶಿ ದರ್ಶನ "ಯೋಜನೆ ರೂಪಿಸಿತ್ತು. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ನೆನೆಗುದಿಗೆ ಬಿದ್ದಿದ್ದು, ಮೀಸಲಿಟ್ಟಿದ್ದ ಹಣ ವಾಪಸ್ ಹೋಗುವಂತಾಗಿದೆ.