ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಕುರುಡು ಕಾಂಚಾಣ ಸದ್ದು - : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕುರುಡು ಕಾಂಚಾಣ ಸದ್ದು
ಶಿವಮೊಗ್ಗ:ಮತದಾರರನ್ನು ಸೆಳೆಯಲು ಮತಗಟ್ಟೆಗಳ ಬಳಿಯೇ ಹಣ ಹಂಚುವ ಕಾರ್ಯವನ್ನು ಅಭ್ಯರ್ಥಿಗಳು ಯಾವುದೇ ಅಡೆತಡೆಯಿಲ್ಲದೆ ನಡೆಸುತ್ತಿದ್ದಾರೆ. ಭದ್ರಾವತಿ ತಾಲೂಕು ಕೊಡ್ಲಿಗೆರೆ ಗ್ರಾ.ಪಂಚಾಯತಿಗೆ ಸ್ಪರ್ಧಿಸಿರುವ ಕುಬೇರ್ ನಾಯ್ಕ ಎಂಬ ಅಭ್ಯರ್ಥಿ ಮತಗಟ್ಟೆಯ ಬಳಿಯೇ ಮತದಾರರಿಗೆ ಹಣ ನೀಡುತ್ತಿದ್ದರು. ಕುಬೇರ ನಾಯ್ಕ ಹಣ ಹಂಚುವ ವಿಡಿಯೋ ವೈರಲ್ ಆಗಿದೆ.