ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೋದಿ ಅಲೆಯಲ್ಲ ಸುನಾಮಿಯೇ ಎದ್ದಿದೆ : ಪ್ರತಾಪ್ ಸಿಂಹ - undefined
ಮೈಸೂರು: ಕಳೆದ ಬಾರಿ 32 ಸಾವಿರ ಓಟುಗಳಿಂದ ಗೆದ್ದಿದ್ದೆ. ಈ ಬಾರಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಮೈಸೂರಿನ ಜನರು ನೀಡಿ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ. ಬಿಜೆಪಿ 400 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಎಲ್ಲರ ಆಸೆ ಒಂದೇ, ಕ್ಷೇತ್ರಕ್ಕೆ ಮೋದಿ ಜಿ ಬರಬೇಕು ಎನ್ನುವುದು. ನಮ್ಮ ಅದೃಷ್ಟ ಮೋದಿಜಿ ಅವರು ನಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ. ಇಲ್ಲಿ ಮೋದಿ ಅಲೆಯಲ್ಲ ಸುನಾಮಿಯೇ ಎದ್ದಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದರು.