ನಾಳೆ ಜನತಾ ಕರ್ಫ್ಯೂ ಕರೆ: ಗ್ರಾಮಗಳಲ್ಲಿ ಡಂಗುರ
ಕೊರೊನಾ ವೈರಸ್ ತಡೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಜನತಾ ಕರ್ಫ್ಯೂ ಕರೆಗೆ ನಾಳೆ (ಮಾ.22) ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಡಂಗುರ ಸಾರಿಸುವ ಮೂಲಕ ನಾಳೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಹೊರಗೆ ಬರದಂತೆ ಸೂಚಿಸಲಾಗುತ್ತಿದೆ. ಹರಪನಹಳ್ಳಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಈ ರೀತಿಯ ದೃಶ್ಯಗಳು ಶನಿವಾರ ಸಾಮಾನ್ಯವಾಗಿ ಕಂಡು ಬಂತು. ಕೆಲ ಗ್ರಾಮದ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸೇರಿ, ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದ ತಂಡದಿಂದ ಕರಪತ್ರ ಹಂಚಲಾಯಿತು.