ವಿಡಿಯೋ: ಬಿಕ್ಕಿ ಬಿಕ್ಕಿ ಅತ್ತ ಮಂಡ್ಯ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು - ಮಾಧ್ಯಮದ ಮುಂದೆ ಕಣ್ಣೀರಿಟ್ಟ ಬೂಕಹಳ್ಳಿ ಮಂಜು
ಮಂಡ್ಯ: ಪರಿಷತ್ ಚುನಾವಣೆೆಗೆ ಮತದಾನ ನಡೆಯುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಬಿಜೆಪಿ ಅಭ್ಯರ್ಥಿಗೆ ಬಿಜೆಪಿಯವರೇ ಮೋಸ ಮಾಡಿದ್ರಾ? ಅನ್ನೋ ಧಾಟಿಯಲ್ಲಿ ಮಂಜು ಮಾತನಾಡಿದ್ದು, ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದೆ. ನಿನ್ನೆ ಸಂಜೆ 4 ಗಂಟೆವರೆಗೆ ಎಲ್ಲವೂ ಚೆನ್ನಾಗಿತ್ತು. ಆ ಬಳಿಕ ಬದಲಾವಣೆಯಾಗಿದೆ. ಒಂದು ವರ್ಷದ ಹೋರಾಟ ನೀರಿನಲ್ಲಿ ಹೋಮ ಮಾಡಿದಂತೆ ಮಾಡುತ್ತಿದ್ದಾರೆ. ಆದರೆ ನನ್ನ ಹೋರಾಟ ಬಿಡಲಾರೆ ಎಂದರು.
TAGGED:
ಎಂಎಲ್ಸಿ ಚುನಾವಣೆ ಮತದಾನ