ರೀ.. ಸಿ ಪಿ ಯೋಗೇಶ್ವರ್ ಅವರೇ, ನಿಮ್ಗೇ ಇಂಥ ಬರ್ತ್‌ಡೇ ಸಂಭ್ರಮ ಈಗ ಬೇಕಾ!? - mlc yogeshwar
ಕೊರೊನಾ ಭೀತಿಯಲ್ಲೂ ರಾಜಾರೋಷವಾಗಿ ಜನ್ಮ ದಿನ ಆಚರಿಸಿಕೊಂಡ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಲ್ಯಾಣ ಮಂಟಪದಲ್ಲಿ ನಡೆದ ಬರ್ತ್‌ಡೇ ಕಾರ್ಯಕ್ರಮದಲ್ಲಿ ಸಾವಿರಾರು ಜನ ನೆರೆದಿದ್ದರು. 57 ಕೆಜಿ ತೂಕದ ಕೇಕ್ ಕತ್ತರಿಸಲಾಗಿತ್ತು. ಜತೆಗೆ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು. ಕಾನೂನು ಕಟ್ಟುಪಾಡು ಲೆಕ್ಕಿಸದೇ ಸಾಮೂಹಿಕ ಆಚರಣೆಯಲ್ಲಿ ಭಾಗಿಯಾಗಿರುವುದು ಸಾರ್ವಜನಿಕರ ಕಣ್ಣು ಕೆಂಪಗಾಗಿಸಿದೆ. ಸಾಮಾಜಿಕ ಅಂತರ ಮರೆತ ಬೆಂಬಲಿಗರು, ಹೂವಿನ ಹಾರ, ಶಾಲು ಹಾಕಲು ಮುಗಿಬಿದ್ದಿದ್ದರು. ಪತ್ನಿ ಶೀಲಾ, ಪುತ್ರಿ ನಿಶಾ ಯೋಗೇಶ್ವರ್, ಪುತ್ರ ಸಾಯಿಧ್ಯಾನ್, ಶ್ರವಣ್ ಕೂಡ ಭಾಗಿಯಾಗಿದ್ದರು.