ವಿಧಾನ ಪರಿಷತ್ನಲ್ಲಿ ನಡಿದ ದುರ್ಘಟನೆ ಮರುಕಳಿಸಬಾರದು: ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ - ಮೈಸೂರು ಸುದ್ದಿ
ಮೈಸೂರು:ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆ, ಅದೊಂದು ಘಟನೆಯಲ್ಲ ದುರ್ಘಟನೆ. ಎಂದೂ ಆ ದುರ್ಘಟನೆ ಮರುಕಳಿಸಬಾರದು. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಧಾನ ಪರಿಷತ್ನ ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಹಿರಿಯರ ಮನೆ ಎಂದು ಪ್ರಸಿದ್ಧವಾಗಿರುವ ಪರಿಷತ್ ಬೇಕು ಬೇಡಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಾನು ಏನನ್ನು ಹೇಳುವುದಿಲ್ಲ. ಬೇಕು ಅಥವಾ ಬೇಡ ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ, ವಿಧಾನ ಪರಿಷತ್ನಲ್ಲಿ ನಡೆಯುವ ಚರ್ಚೆ ತುಂಬ ಅರ್ಥಪೂರ್ಣವಾಗುತ್ತದೆ. ಸರ್ಕಾರಕ್ಕೆ ಮಾರ್ಗದರ್ಶನ ಮಾಡಲು, ಜನಪರ ಚರ್ಚೆ ಮಾಡಲು ಪರಿಷತ್ ಅವಶ್ಯಕ. ನಾವು ಇನ್ನು ಮುಂದೆ ಪರಿಷತ್ ಆರಂಭವಾದ ಮೇಲೆ ಪ್ರಾರಂಭದಲ್ಲಿ ಎಲ್ಲಾ ಸದಸ್ಯರು ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಬೇಕು ಎಂದು ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಸಲಹೆ ನೀಡಿದರು.