ಪ್ರತಿ ಪಂಚಾಯತ್ನಲ್ಲಿಯೂ ಒಂದು ಪಬ್ಲಿಕ್ ಶಾಲೆ ತೆರೆಯಬೇಕು : ಶಾಸಕ ಶಿವಲಿಂಗೇಗೌಡ - MLA Shivalinga Gowda
ಬೆಂಗಳೂರು : ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಹೀಗಾಗಿ, ಸರ್ಕಾರ ಪ್ರತಿ ಪಂಚಾಯತ್ನಲ್ಲಿಯೂ ಒಂದು ಪಬ್ಲಿಕ್ ಶಾಲೆ ತೆರೆಯಬೇಕು. ಇದನ್ನು ಬಿಟ್ಟು ಇರುವ ಶಾಲೆಗಳಿಗೆ ತ್ಯಾಪೆ ಹಾಕುವ ಕೆಲಸ ಮಾಡಬಾರದು. ಸರ್ಕಾರಿ ಶಾಲೆಗಳನ್ನೇ ಅಭಿವೃದ್ಧಿಪಡಿಸಬೇಕು ಎಂದು ಶಾಸಕ ಶಿವಲಿಂಗೇಗೌಡರು ಸರ್ಕಾರಕ್ಕೆ ಒತ್ತಾಯಿಸಿದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ರಮೇಶ್ಕುಮಾರ್, ದೆಹಲಿಯಲ್ಲಿ ಆಪ್ ಸರ್ಕಾರದವರು ಸರ್ಕಾರಿ ಶಾಲೆ ನಡೆಸುತ್ತಿದ್ದಾರೆ. ಇದರಿಂದ ಪೋಷಕರು ಖಾಸಗಿ ಶಾಲೆಯಿಂದ ತಮ್ಮ ಮಕ್ಕಳನ್ನು ಬಿಡಿಸಿ, ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಇದೇ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲಿಯೂ ಬದಲಾವಣೆ ಮಾಡಬೇಕು ಎಂದರು.