ರಸ್ತೆ ಅಗಲೀಕರಣ ವಿವಾದ: ಮಂಡ್ಯ ಡಿಸಿ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಗರಂ - ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಗರಂ
ಮಂಡ್ಯ ಜಿಲ್ಲಾಧಿಕಾರಿ ಡಾ. ಎಂವಿ ವೆಂಕಟೇಶ್ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ರಸ್ತೆ ಅಗಲೀಕರಣ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು. ಗ್ರಾಮದ ರಸ್ತೆಯ ಪಕ್ಕದ ನಿವಾಸಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಅನುಕೂಲ ಆಗಲೆಂದು ಜಿಲ್ಲಾಧಿಕಾರಿ ಕಾಲ ಕಳೆಯುತ್ತಾ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು. ಇದು ಲಕ್ಷಾಂತರ ಜನರು ಓಡಾಡುವ ರಸ್ತೆ. ಈ ರಸ್ತೆಯನ್ನು ಮಾಡಿಯೇ ತೀರುತ್ತೇನೆ. ಈ ವಿಷಯದಲ್ಲಿ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಸುಮ್ಮನಿದ್ದರೆ ಅವರಿಗೇ ಒಳಿತು ಎಂದು ಕುಟುಕಿದರು. ಇನ್ನು ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅನಧಿಕೃತವಾಗಿ ಜಲ್ಲಿ ಕ್ರಷರ್‌ಗಳು ನಡೆಯುತ್ತಿವೆ. ಅಧಿಕಾರಿಗಳು ಅದನ್ನು ತಡೆಯಬೇಕು. ಕಾನೂನು ಬದ್ಧ ಗಣಿಗಾರಿಕೆ ಅವಕಾಶ ನೀಡಬೇಕು ಎಂದರು.