ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ: ಬಿಎಸ್ವೈ ವಿರುದ್ಧ ಶಾಸಕ ರಾಮಪ್ಪ ಆಕ್ರೋಶ - Harihara MLA S Ramappa
ದಾವಣಗೆರೆ: ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ 25ರಿಂದ 50 ಕೋಟಿ ಅನುದಾನ ಕೊಡ್ತಾರೆ. ಆದರೆ, ಕಾಂಗ್ರೆಸ್ ಶಾಸಕರಿಗೆ ಮಂಜೂರಾಗಿರುವ ಹಳೇ ಅನುದಾನವನ್ನೂ ಸಹ ಕಿತ್ತುಕೊಂಡಿದ್ದಾರೆ. ಹೀಗೆ ಮಾಡಿದರೆ ಧಿಕ್ಕಾರ ಹಾಕುತ್ತೇನೆ ಎಂದು ಹರಿಹರ ಶಾಸಕ ಎಸ್.ರಾಮಪ್ಪ ಗುಟುರು ಹಾಕಿದ್ದಾರೆ. ಹರಿಹರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕೂಡಲೇ ಟೆಂಡರ್ ಆಗಿರುವ ಕಾಮಗಾರಿಗೆ ಹಣ ನೀಡಬೇಕು. ಇಲ್ಲದಿದ್ದಲ್ಲಿ ಹರಿಹರ ಜನತೆಯೊಂದಿಗೆ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.