ರಮೇಶಣ್ಣ ತಪ್ಪು ಮಾಡಿಲ್ಲ, ಇದು ವ್ಯವಸ್ಥಿತ ಪಿತೂರಿ: ಶಾಸಕ ರಾಜುಗೌಡ - karnatak minister cd,
ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಅಣ್ಣ ತಪ್ಪು ಮಾಡಿಲ್ಲ, ಅವರ ಕುಟುಂಬ ಮುಜುಗರಕ್ಕೆ ಒಳಗಾಗಿದೆ. ದೊಡ್ಡ ಮೊತ್ತದ ಹಣ ವ್ಯಯಿಸಿ ವಿದೇಶದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಿದರೆ, ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಯಾರು ಮಾಡಿದ್ದಾರೆ ಅನ್ನೋದನ್ನು ನಾನು ಹೇಳಲ್ಲ. ಸಿಬಿಐ ತನಿಖೆಯಿಂದ ಸತ್ಯ ಬಯಲಾಗಲಿ. ರಮೇಶ್ ಅಣ್ಣನ ಬೆಂಬಲಕ್ಕೆ ಬಿಜೆಪಿ ಪಕ್ಷ ನಿಲ್ಲಲಿದೆ ಎಂದು ಸುರಪುರ ಬಿಜೆಪಿ ಶಾಸಕ ರಾಜುಗೌಡ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
Last Updated : Mar 4, 2021, 5:51 PM IST