ನಾರಾಯಣರಾವ್ ಜೀವ ಹೋಗಿದೆ.. ಅದಕ್ಕೆ ಒಂದು ವೋಟ್ ಕೇಳ್ತಾ ಇದ್ದೀವಿ: ಶಾಸಕ ರಹಿಂಖಾನ್ - MLA Rahim Khan appeal for vote
ಬೀದರ್: ಶಾಸಕ ಬಿ.ನಾರಾಯಣರಾವ್ ಅವರು ಜನರ ಸೇವೆ ಮಾಡುವಾಗಲೇ ಜೀವ ಹೋಗಿದೆ. ಈಗ ಅವರ ಪತ್ನಿ ನಿಮ್ಮದೊಂದು ವೋಟ್ ಕೇಳ್ತಾ ಇದ್ದಾರೆ. ಅದನ್ನು ನೀಡುವ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿಯಬೇಕಾಗಿದೆ ಎಂದು ಶಾಸಕ ರಹಿಂಖಾನ್ ಮನವಿ ಮಾಡಿದರು. ಬಸವಕಲ್ಯಾಣ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಪರ ಚುನಾವಣೆ ಪ್ರಚಾರ ನಿಮಿತ್ತ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು ಕೊರೊನಾ ಸಂದರ್ಭದಲ್ಲಿ ಜನರ ಸೇವೆ ಮಾಡುತ್ತ ಕೊರೊನಾ ಮಹಾಮಾರಿಗೆ ಬಿ.ನಾರಾಯಣರಾವ್ ಬಲಿಯಾಗಿದ್ದಾರೆ. ಅವರ ನಂತರ ಪಕ್ಷ ಅವರ ಪತ್ನಿ ಮಾಲಾ ಅವರಿಗೆ ಟಿಕೆಟ್ ನೀಡುವ ಮೂಲಕ ನ್ಯಾಯ ಕೊಟ್ಟಿದೆ. ಈಗ ಬಸವಕಲ್ಯಾಣ ಜನರು ಅವರಿಗೆ ನ್ಯಾಯ ಕೊಡುವ ಸಮಯ ಬಂದಿದೆ ಎಂದರು.