ನಾಗಾವಿ ಕ್ಯಾಂಪಸ್ ಕೋವಿಡ್ ಕೇಂದ್ರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ - ಕೋವಿಡ್ ಕೇಂದ್ರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ
ಕಲಬುರಗಿ: ಚಿತ್ತಾಪುರ ಪಟ್ಟಣದ ನಾಗಾವಿ ಕ್ಯಾಂಪಸ್ನಲ್ಲಿ ಸ್ಥಾಪಿಸಲಾಗಿರುವ ಕೊವೀಡ್ ಕೇರ್ ಸೆಂಟರ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಸರಿಯಾದ ಸಮಯಕ್ಕೆ ರೋಗಿಗಳಿಗೆ ಊಟೋಪಚಾರ ಹಾಗೂ ಔಷಧ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಕೇರ್ ಸೆಂಟರ್ನಲ್ಲಿ ಬೆಡ್ ಕೊರತೆ ಉಂಟಾದ ಹಿನ್ನೆಲೆ ಕೆಪಿಸಿಸಿಯಿಂದ 100 ಬೆಡ್ ನೀಡಲಾಗಿದೆ.