ಕರ್ನಾಟಕ

karnataka

ETV Bharat / videos

ಪೇಮೆಂಟ್ ಕೊಟ್ಟ ಕಡೆ ಹಳ್ಳಿಹಕ್ಕಿ: ಸಾ.ರಾ.ಮಹೇಶ್​ ಟೀಕೆ - ಸಾ.ರಾ. ಮಹೇಶ್ ಲೆಟೆಸ್ಟ್ ನ್ಯೂಸ್

By

Published : Nov 28, 2020, 1:39 PM IST

ಮೈಸೂರು: ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ಹಳ್ಳಿಹಕ್ಕಿ ಹೇಳಿಕೆಗೆ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷ ಕಾಂಗ್ರೆಸ್ ಪಕ್ಷ ನಮ್ಮ ತಂದೆ - ತಾಯಿ ಎಂದು ಹೇಳಿಕೊಂಡು ತಿರುಗುತ್ತಿದ್ದರು. ಆ ಬಳಿಕ ಕಾಂಗ್ರೆಸ್​​ಗೆ ಡೈವರ್ಸ್ ಕೊಟ್ಟು ಅಲ್ಲಿಂದ ಅವರನ್ನು ನಾವು ಕರೆದುಕೊಂಡು ಬಂದು ಎಮ್​ಎಲ್​ಸಿ ಮಾಡಿದ್ದೆವು. 30 ವರ್ಷ ಕಾಂಗ್ರೆಸ್​​ನಲ್ಲಿ, ಒಂದು ವರ್ಷ ಜೆಡಿಎಸ್​​ನಲ್ಲಿ ಈಗ ಹಳ್ಳಿಹಕ್ಕಿ ಯಾರು? ಪೇಮೆಂಟ್ ಮಾಡುತ್ತಾರೋ ಅಲ್ಲಿ ಇರುತ್ತಾರೆ. ಸಖ ಯಾರು ಎಂಬುದು ನೀವೇ ತೀರ್ಮಾನ ಮಾಡಿ ಎಂದು ವಿಶ್ವನಾಥ್​ ವಿರುದ್ಧ ಮಹೇಶ್​ ಗುಡುಗಿದರು.

ABOUT THE AUTHOR

...view details