ಕರ್ನಾಟಕ

karnataka

ETV Bharat / videos

ಯಾರೋ ಹೇಳಿಕೆ ನೀಡಿದ್ರು ಅಂತ ಸಿಎಂ ಬದಲಾವಣೆ ಆಗೋದಿಲ್ಲ: ಕುಮಾರ್ ಬಂಗಾರಪ್ಪ - ಶಾಸಕ ಕುಮಾರ್ ಬಂಗಾರಪ್ಪ

By

Published : Jan 31, 2021, 10:04 AM IST

ಯಾರೋ ಒಬ್ಬರು ಹೇಳಿಕೆ ನೀಡಿದರೂ ಅಂತ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋಲ್ಲ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿ ಕಂಬಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾತನಾಡಿದ ಅವರು, ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಈ ನಿರ್ಧಾರ ಕೇಂದ್ರದ್ದು. ಶಾಸಕ ಯತ್ನಾಳ್ ಈ ರೀತಿಯ ಗೊಂದಲಗಳನ್ನು ಸೃಷ್ಟಿಸುವುದು ಸೂಕ್ತ ಅಲ್ಲ. ಈಗಾಗಲೇ ಯತ್ನಾಳ್ ಅವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ಕೂಡ ನೀಡಿದೆ. ಪಕ್ಷದ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ. ಕೇಂದ್ರ ಈ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ. ರಾಜಕಾರಣದಲ್ಲಿ ಎಲ್ಲರಿಗೂ ಮುಂದೆ ಬರಬೇಕೆಂಬ ಇಚ್ಛೆ ಇರುತ್ತದೆ. ಆದರೆ ಯಾರನ್ನೋ ತುಳಿದು ಮೇಲೆ ಬರಬೇಕಾಗಿಲ್ಲ. ಅದರ ಬದಲಿಗೆ ಉತ್ತಮ ಕೆಲಸ ಮಾಡಿ, ಜನಮನ್ನಣೆ ಗಳಿಸಿ ಸ್ಥಾನ ಪಡೆದುಕೊಳ್ಳಬೇಕು ಎಂದರು.

ABOUT THE AUTHOR

...view details