ಮಂಗಳೂರು: ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಶಾಸಕ ವೇದವ್ಯಾಸ ಕಾಮತ್! - kamath played cricket at Mangalore
ರಾಜಕೀಯ ಒತ್ತಡದ ನಡುವೆಯೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಗಲ್ಲಿ ಕ್ರಿಕೆಟ್ ಆಡಿದ್ದಾರೆ. ನಗರದ ನಂದಿಗುಡ್ಡೆ ಮೈದಾನ ಸಮೀಪ ಕುಡಿಯುವ ನೀರಿನ ಟ್ಯಾಂಕ್ ಶಿಲಾನ್ಯಾಸ ನೆರವೇರಿಸಲು ಬಂದಿದ್ದ ಅವರು, ಅಲ್ಲಿಯೇ ಆಡುತ್ತಿದ್ದ ಯುವಕರಿಂದ ಬ್ಯಾಟ್ ಪಡೆದುಕೊಂಡು ಕ್ರಿಕೆಟ್ ಆಡಿ ಕೊಂಚ ರಿಲ್ಯಾಕ್ಸ್ ಆದರು. ಯುವಕರೊಂದಿಗೆ ಲವಲವಿಕೆಯಿಂದ ಬಾಲ್ ಹಾಕಿಸಿಕೊಂಡು ಕ್ರಿಕೆಟ್ ಆಡಿದ ಶಾಸಕರ ಬ್ಯಾಟಿಂಗ್ಗೆ ಸ್ಥಳದಲ್ಲಿದ್ದವರು ಫಿದಾ ಆದರು.