ಸಿದ್ದರಾಮಯ್ಯ ಏನೇ ಬೈದರೂ ಅದು ನಮಗೆ ಆಶೀರ್ವಾದವಿದ್ದಂತೆ: ಬಿ.ಸಿ.ಪಾಟೀಲ್ - ಶಾಸಕ ಬಿ.ಸಿ.ಪಾಟೀಲ್
ಮಾಜಿ ಸಿಎಂ ಸಿದ್ದರಾಮಯ್ಯ ನಮಗೆ ಬೈದಾಗಲೆಲ್ಲಾ ಒಳ್ಳೆಯದಾಗುತ್ತದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೈಗುಳ ನಮಗೆ ಆಶೀರ್ವಾದವಿದ್ದಂತೆ ಎಂದರು. ಸಿದ್ದರಾಮಯ್ಯ ಅಭಿಪ್ರಾಯಪಟ್ಟಂತೆ ನಾವೇನು ಅಂತರಪಿಶಾಚಿಗಳಾಗಿಲ್ಲ. ಇನ್ನೆರಡು ದಿನ ಕಾಯಿರಿ, ಎಲ್ಲಾ ಸರಿ ಹೋಗುತ್ತೆ ಎಂದರು. ಹೆಚ್.ವಿಶ್ವನಾಥ್ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ನಮಗೆ ಯಾವ ಖಾತೆ ಕೊಟ್ಟರೂ ನಿಭಾಯಿಸುವ ವಿಶ್ವಾಸವಿದೆ ಎಂದರು.