'ನಾಪತ್ತೆ'ಗೆ ಆಕ್ಷೇಪ; ಕಲಾಪದಲ್ಲಿ ಯತ್ನಾಳ್-ರೇಣುಕಾಚಾರ್ಯ ಜಟಾಪಟಿ - ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್
ವಿಧಾನಸಭೆ: ಇಂದು ವಿಧಾನ ಸಭೆ ಕಲಾಪದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಎಂ.ಪಿ. ರೇಣುಕಾಚಾರ್ಯ ನಡುವೆ ಜಟಾಪಟಿ ನಡೆಯಿತು. 2ಎ ಮೀಸಲಾತಿ ವಿಚಾರವಾಗಿ ಸದನದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ನಿನ್ನೆ ನಮಗೆ ಸಿಎಂ ಹೇಳಿದ್ದರು, ಇವತ್ತು ಉತ್ತರ ಕೊಡುತ್ತೇನೆ ಅಂತ. ಆದರೆ, ಇಂದು ಮುಖ್ಯಮಂತ್ರಿಗಳು ನಾಪತ್ತೆಯಾಗ್ತಾರೆ. ಇದೇನು ವ್ಯವಸ್ಥೆ ಎಂದು ಪ್ರಶ್ನಿಸಿದರು. ಇದಕ್ಕೆ ಕುಪಿತರಾದ ಎಂ.ಪಿ. ರೇಣುಕಾಚಾರ್ಯ, ನೀವು ನಾಪತ್ತೆ ಪದ ಬಳಸಬೇಡಿ ಎಂದರು. ಈ ವಿಚಾರದಲ್ಲಿ ನಾವು ನಿಮಗೆ ಬೆಂಬಲ ನೀಡುತ್ತೇವೆ. ಆದರೆ ನಾಪತ್ತೆ ಪದ ಬಳಸಬೇಡಿ ಎಂದು ಗರಂ ಆದರು. ಕೆಲ ಹೊತ್ತು ಇಬ್ಬರ ಮಧ್ಯೆ ಜಟಾಪಟಿ ನಡೆಯಿತು. ನಂತರ ಮಧ್ಯ ಪ್ರವೇಶಿಸಿದ ಸ್ಪೀಕರ್, ಬಸನಗೌಡ ಪಾಟೀಲ ಯತ್ನಾಳ್ ಅವರೇ, ನೀವು ನನ್ನ ನೋಡಿ ಮಾತಾಡಿ ಎಂದರು.
Last Updated : Mar 10, 2021, 2:51 PM IST