ಹಾನಿಯಾದ ಸೇತುವೆ ಮೇಲೆ ಬಂದ ಲಾರಿ: ಚಾಲಕನಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಹಿಗ್ಗಾಮುಗ್ಗಾ ತರಾಟೆ - ಸೇತುವೆ ಮರು ನಿರ್ಮಾಣ
ಬೆಳಗಾವಿ: ನೆರೆಯಿಂದ ಹಾನಿಗೆ ತುತ್ತಾದ ಸೇತುವೆ ಮೇಲೆ ಭಾರಿ ವಾಹನ ಸಾಗಿಸಲು ಯತ್ನಿಸಿದ ಲಾರಿ ಚಾಲಕನನ್ನು ಶಾಸಕಿ ಅಂಜಲಿ ನಿಂಬಾಳ್ಕರ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ಖಾನಾಪುರ-ಪಣಜಿ ಸಂಪರ್ಕಿಸುವ ರಸ್ತೆಯ ಸೇತುವೆ ಮೇಲೆ ನಡೆದಿದೆ. ಹಾಳಾಗಿದ್ದ ಸೇತುವೆ ಮರು ನಿರ್ಮಾಣಕ್ಕೆ ಯೋಜನೆ ರೂಪಿಸಲು ಸ್ಥಳಕ್ಕೆ ಆಗಮಿಸಿದ್ದ ಶಾಸಕಿ, ಸೇತುವೆ ಮೇಲೆ ಭಾರಿ ವಾಹನ ಸಾಗಾಟ ನಿಷೇಧದ ಫಲಕ ನೋಡಿಯೂ ಲಾರಿ ಸಾಗಿಸಲು ಚಾಲಕ ಯತ್ನಿಸಿದ ಹಿನ್ನೆಲೆ ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣವೇ ಚಾಲಕ ಲಾರಿ ರಿವರ್ಸ್ ತೆಗೆದುಕೊಂಡು ಹಿಂತಿರುಗಿದ್ದಾನೆ.
Last Updated : Aug 19, 2019, 10:33 AM IST