ಪಟಾಕಿ ಎಸೆದು ಮರದಲ್ಲಿರುವ ಹಕ್ಕಿಗಳನ್ನು ಓಡಿಸುತ್ತಿರುವ ಕಿಡಿಗೇಡಿಗಳು! - ಬೆಳ್ಳಕ್ಕಿಗಳನ್ನು ಓಡಿಸಿದ ಕಿಡಿಗೇಡಿಗಳು
ಕಡಬ: ಕಡಬದ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಮರದಲ್ಲಿ ಮಳೆಗಾಲ ಸಮೀಪಿಸುವ ಸಮಯದಲ್ಲಿ ವಲಸೆ ಬರುವ ಬೆಳ್ಳಕ್ಕಿಗಳ ಗುಂಪು ಗೂಡುಕಟ್ಟಿ ವಾಸವಾಗುತ್ತದೆ. ಇದೀಗ ಸಾಮಾನ್ಯವಾಗಿ ಎಲ್ಲಾ ಗೂಡುಗಳಲ್ಲಿ ಪುಟ್ಟ ಹಕ್ಕಿಮರಿಗಳು ಇವೆ. ಇದೇ ಮರದ ಕೆಳಗಡೆ ಕೆಲವು ಗೂಡಂಗಡಿಗಳು ತಲೆಯೆತ್ತಿವೆ. ಆದ್ರೆ ಸಾಯಂಕಾಲ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಈ ಹಕ್ಕಿಗಳು ಗೂಡುಕಟ್ಟಿ ವಾಸವಾಗಿರುವ ಮರಕ್ಕೆ ಪಟಾಕಿ ಬೆಂಕಿ ಹಚ್ಚಿ ಎಸೆದಿದ್ದಾರೆ. ಇದರಿಂದ ಹಕ್ಕಿಗಳು ಚೆಲ್ಲಾಪಿಲ್ಲಿಯಾಗಿ ಹಾರಾಡುವ ದೃಶ್ಯ ಕಂಡುಬಂದಿದೆ. ಯಾವುದೇ ತೊಂದರೆ ನೀಡದೇ ತಮ್ಮ ಪಾಡಿಗೆ ತಾವು ತಮ್ಮ ಮರಿಗಳೊಂದಿಗೆ ಗೂಡುಕಟ್ಟಿ ಸ್ವಚ್ಛಂದವಾಗಿ ಇದ್ದ ಹಕ್ಕಿಗಳಿಗೆ ಕಂಟಕವಾಗುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಕೃತ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಪಕ್ಷಿ ಪ್ರೇಮಿಗಳು ಆಗ್ರಹಿಸಿದ್ದಾರೆ.
Last Updated : Sep 4, 2020, 6:53 AM IST