ಹಾವಿನೊಂದಿಗೆ ಮಹಿಳೆಯ ಆಟ... ಬೆಚ್ಚಿ ಬೆರಗಾದ ಕೊಪ್ಪಳ ಜನ! - koppal women Miracle news
ಕೊಪ್ಪಳ: ಕೆಲಸ ಮಾಡುತ್ತಿದ್ದಾಗ ಕಂಡ ಹಾವನ್ನು ಮಹಿಳೆವೋರ್ವಳು ಹಿಡಿದು ಕೊರಳಿಗೆ ಹಾಕಿಕೊಂಡು ಜನರಿಗೆ ಅಚ್ಚರಿ ಮೂಡಿಸಿದ್ದಾಳೆ. ಕೆಲ ಹೊತ್ತು ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಹಿರೇಬಗನಾಳ ಗ್ರಾಮದಲ್ಲಿರುವ ಶ್ರೀ ಗವಿಸಿದ್ದೇಶ್ವರ ಶಾಖಾ ಮಠಕ್ಕೆ ತೆರಳಿದ್ದಾಳೆ. ಅಲ್ಲಿಯೂ ಸಹ ಹಾವಿನೊಂದಿಗೆ ಕೊಂಚಹೊತ್ತು ಆಟವಾಡಿದ್ದಾಳೆ. ಇದನ್ನು ಕಂಡು ಜನ ದೈವಲೀಲೆ ಎಂದು ಬಣ್ಣಿಸಿ ಭಕ್ತಿಭಾವ ಮೆರೆದಿದ್ದಾರೆ.