ಬೆಳ್ಳೋಡಿ ಬೀರಲಿಂಗೇಶ್ವರನ ಸನ್ನಿಧಿಯಲ್ಲಿ ನಡೆಯಿತೆ ಪವಾಡ?! - ಬೆಳ್ಳೋಡಿ ಗ್ರಾಮದಲ್ಲಿ ಕಾರ್ತಿಕೋತ್ಸವ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿ ಗ್ರಾಮದಲ್ಲಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿದ್ದು, ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಕಾರ್ತಿಕೋತ್ಸವದಲ್ಲಿ ಪವಾಡ ನಡೆದಿದೆ ಎನ್ನಲಾಗ್ತಿದೆ. ಇದು ಭಕ್ತರ ಅಚ್ಚರಿಗೂ ಕಾರಣವಾಗಿದೆ. ಇಲ್ಲಿ ಲೋಳೆಸರಕ್ಕೆ ಕುಡುಗೋಲು ಹಾಕಿ, 10 ಕೆಜಿ ಕಲ್ಲು ಕಟ್ಟಿ ತೂಗು ಹಾಕಲಾಗುತ್ತದೆ. ಗಿಡದ ಬಳ್ಳಿಗೆ ತೂಕದ ಗುಂಡು ಕಲ್ಲು ನೇತಾಕಿದರೂ ಕೆಳಗೆ ಬೀಳಲ್ಲ. ಇದು ದೇವರ ಪವಾಡ ಅನ್ನೋದು ಭಕ್ತರ ನಂಬಿಕೆಯಾಗಿದೆ. ಲೋಳೆಸರವು ಈ ಗಾತ್ರದ ಕಲ್ಲಿನ ಭಾರ ತಡೆದುಕೊಂಡಿರುವುದೇ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
Last Updated : Dec 8, 2019, 8:16 PM IST