ಆಸ್ತಿಗಾಗಿ ಅಜ್ಜನನ್ನೇ ಮಸಣಕ್ಕೆ ಕಳಿಸಿದ ಅಪ್ರಾಪ್ತ: ಫೋನ್ ಕಾಲ್ ಸುಳಿವಿನಿಂದ ಸಿಕ್ಕಿಬಿದ್ದ ಚಾಲಾಕಿ - ಮೊಮ್ಮಗನಿಂದ ಕೊಲೆ
ಹಲವು ರೀತಿಯ ಕೊಲೆ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ. ಇಲ್ಲೊಂದು ಸ್ಟೋರಿ ಮಾತ್ರ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ. ನಿವೃತ್ತ ಅರಣ್ಯ ರಕ್ಷಕನ ಹತ್ಯೆ ಪ್ರಕರಣವನ್ನು ಭೇದಿಸಿದ ಪೊಲೀಸರು ಮಹತ್ವದ ವಿಚಾರವನ್ನು ಹೊರಗೆಳೆದಿದ್ದಾರೆ. ತಾಯಿಯ ಚಿಕಿತ್ಸೆ ಹಾಗೂ ತಂಗಿಯ ವಿದ್ಯಾಭ್ಯಾಸಕ್ಕೆ ಹಣ ನೀಡದ ಕಾರಣಕ್ಕೆ ಮೊಮ್ಮಗ ತನ್ನ ಅಜ್ಜನನ್ನೇ ಕೊಲೆ ಮಾಡಿರುವ ವಿಚಾರ ತನಿಖೆಯಿಂದ ಬಯಲಾಗಿದೆ.