ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿ ರೈಲು ನಿಲ್ದಾಣ ಸ್ಫೋಟಕ್ಕೂ ಈ ರಾಜ್ಯಗಳಿಗೂ ಇದೆಯಾ ಲಿಂಕ್​?... ಬೊಮ್ಮಾಯಿ ಬಿಚ್ಚಿಟ್ರು ಸೀಕ್ರೆಟ್​ - ಗೃಹಸಚಿವ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ

By

Published : Oct 23, 2019, 11:14 AM IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟದ ತನಿಖೆ ತೀವ್ರಗೊಂಡಿದ್ದು, ಸ್ಫೋಟಕದ ಮಾದರಿಯನ್ನು ಎಫ್ಎಸ್ಎಲ್​ಗೆ ಕಳಿಸಲಾಗಿದ್ದು, ಅದರ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ಟಿವಿ ಭಾರತ ಜೊತೆ ಮಾತನಾಡಿದ ಅವರು, ಆಂಧ್ರ ಪ್ರದೇಶದಲ್ಲಿ ಇಂತಹ ಸ್ಫೋಟಕ ವಸ್ತು ಬಳಕೆ ಹೆಚ್ಚು. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ಪೊಲೀಸರ ಸಹಯೋಗದಲ್ಲಿ ತನಿಖೆ ನಡೆಸಲು ಈ ಸ್ಪೋಟಕ ವಸ್ತುಗಳನ್ನು ಎಲ್ಲಿಂದ ತರಲಾಗಿದೆ, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತವೆ ಎಂದರು. ಇನ್ನು ಸಚಿವ ಸಿ.ಟಿ. ರವಿ ಮಾತನಾಡಿ ಹುಬ್ಬಳ್ಳಿ ಈ ಹಿಂದಿನಿಂದಲೂ ಭಯೋತ್ಪಾದಕರ ಅಡುಗು ತಾಣಗಳಾಗಿ, ಅವರ ಕಾರ್ಯಚಟುವಟಿಕೆಗಳಿಗೆ ನೆಲೆಯಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದರು.

For All Latest Updates

ABOUT THE AUTHOR

...view details