ನಂದಿನಿ ಉತ್ಸವದಲ್ಲಿ ಸಚಿವ ಸಿ ಪಿ ಯೋಗೀಶ್ವರ್ ಬೋಟ್ ರೇಸ್ಗೆ ಚಾಲನೆ - Nandini Festival
ಮಂಗಳೂರು : ನಗರದ ಸಸಿಹಿತ್ಲುವಿನಲ್ಲಿ ನಡೆಯುವ ನಂದಿನಿ ಉತ್ಸವದಲ್ಲಿ ಸಚಿವ ಸಿ ಪಿ ಯೋಗೇಶ್ವರ್ ಅವರು ಬೋಟ್ ರೇಸ್ಗೆ ಭಾನುವಾರ ಚಾಲನೆ ನೀಡಿದರು. ಇಂದು ನಡೆಯುವ ಓಪನ್ ಬೋಟ್ ಸಿಂಗಲ್ಸ್, ಸ್ಟಾಂಡ್ಅಪ್ ಪೆಡಲ್ಸ್ ಮೆನ್ ಓಪನ್ ಮ್ಯಾಚ್, ಈಜು ಸ್ಪರ್ಧೆ, ಬೋಟ್ ರೇಸಿಂಗ್ಗೆ ಅವರು ಚಾಲನೆ ನೀಡಿ ಸ್ಪರ್ಧೆಯನ್ನು ವೀಕ್ಷಿಸಿ, ಸ್ಪರ್ಧಿಗಳಿಗೆ ಶುಭಾಶಯ ಕೋರಿದರು. ಬಳಿಕ ಸೀಪ್ಲೇನ್ನನ್ನು ವೀಕ್ಷಣೆ ಮಾಡಿದರು. ನಂದಿನಿ ಉತ್ಸವದಲ್ಲಿ ಸಾಕಷ್ಟು ಮಂದಿ ಯುವಕರು ಭಾಗವಹಿಸಿ ಸಂಭ್ರಮ ಪಟ್ಟರು.