ಮಕ್ಕಳನ್ನು ಆಪಹಾಸ್ಯ ಮಾಡೋ ರೀತಿಯಲ್ಲಿ ಶಿಕ್ಷಕರು ನಡೆದುಕೊಳ್ಳುವುದು ಸುಸಂಸ್ಕೃತವಲ್ಲ: ಸಚಿವ ಸುರೇಶ್ ಕುಮಾರ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್
ತುಮಕೂರು: ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸ ಅಪಹಾಸ್ಯ ಮಾಡುವ ರೀತಿಯಲ್ಲಿ ಶಿಕ್ಷಕರು ನಡೆದುಕೊಳ್ಳುವುದು ಸುಸಂಸ್ಕೃತವಲ್ಲ. ಶಾಲಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವುದು ಕೆಟ್ಟ ಸಂಪ್ರದಾಯ, ಕೆಟ್ಟ ನಡವಳಿಕೆ ಕೆಟ್ಟ ಮೇಲ್ಪಂಕ್ತಿಯಾಗಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಈಟಿವಿ ಭಾರತ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಯ ಪದ ಉಚ್ಚಾರಣೆಯ ಕುರಿತು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಂತಹ ಶಿಕ್ಷಕನಿಗೆ ಕಿಂಚಿತ್ತು ತಪ್ಪಿನ ಮನೋಭಾವ ಇರಲಿಲ್ಲ ಎಂದರು.