ಗಜಪಡೆಗೆ ಪೂಜೆ: ಮಾವುತರಿಗೆ ಗೌರವ ಧನ ನೀಡಿ ಸನ್ಮಾನ - Minister ST Somashekar pays homage
ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಗಜಪಡೆ ಹಾಗೂ ಮಾವುತರಿಗೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪೂಜೆ ಸಲ್ಲಿಸಿ ಸನ್ಮಾನಿಸಿದರು. ಸರಳ ಸಾಂಪ್ರದಾಯಿಕ ದಸರಾದ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಅಭಿಮನ್ಯು, ವಿಜಯ, ವಿಕ್ರಮ, ಗೋಪಿ ಮತ್ತು ಕಾವೇರಿ ಆನೆಗಳಿಗೆ ಪೂಜೆ ಸಲ್ಲಿಸಿ ನಂತರ ಪ್ರತಿಯೊಬ್ಬ ಆನೆ ಮಾವುತರಿಗೆ 10,000 ಗೌರವಧನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಗಜಪಡೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾವುತ ಹಾಗೂ ಕಾವಾಡಿಗಳಿಗೆ ಎಲ್ಲರಿಗೂ 10,000 ರೂಪಾಯಿ ಕೊಟ್ಟಿದ್ದೀವಿ, ಕಳೆದ ವರ್ಷ 7,000 ನೀಡಲಾಗಿತ್ತು. ಈ ವರ್ಷ 10,000 ನೀಡಿದ್ದೇವೆ. ನಾಳೆ ಆನೆಗಳು ಮರಳಿ ತಮ್ಮ ಶಿಬಿರಗಳಿಗೆ ತೆರಳುತ್ತವೆ ಎಂದರು.