ರಾಜಕಾರಣಿಗಳು ಆಣೆ-ಪ್ರಮಾಣದ ಚಾಳಿ ಬಿಡಬೇಕು: ಸಚಿವ ಸೋಮಣ್ಣ - minister v.somanna news
ಕೊಡಗು: ರಾಜಕಾರಣಿಗಳು ಆಣೆ, ಪ್ರಮಾಣದಂತಹ ಚಾಳಿ ಬಿಡಬೇಕು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ಆಣೆ-ಪ್ರಮಾಣ ಪ್ರಹಸನಕ್ಕೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಳೆಯಿಂದ ಭೂ ಕುಸಿತಕ್ಕೆ ಒಳಗಾದ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಚ್.ವಿಶ್ವನಾಥ್ ಅವರು ಒಬ್ಬ ಹಿರಿಯ ರಾಜಕಾರಣಿ. ಸಾ.ರಾ.ಮಹೇಶ್ ಅವರು ಒಬ್ಬ ಬುದ್ಧಿವಂತ ರಾಜಕಾರಣಿ. ಇದೆಲ್ಲಾ ಅವರ ವೈಯ ಕ್ತಿಕ, ಆದರೂ ಇದೆಲ್ಲ ಆಗಬಾರದು. ಈ ರೀತಿ ಆದಾಗ ಯಾರಿಗೂ ಕೂಡ ಬೆಲೆ, ಗೌರವ ಇರುವುದಿಲ್ಲ. ಜನಪ್ರತಿನಿಧಿಗಳೇ ಇಂತಹ ಆರೋಪ-ಪ್ರತ್ಯಾರೋಪಗಳ ಹೇಳಿಕೆಯಲ್ಲಿ ತೊಡಗಿದಾಗ ಜನರನ್ನು ಗೊಂದಲಕ್ಕೀಡು ಮಾಡಿದಂತಾಗುತ್ತದೆ ಎಂದರು.