ಇನ್ನೂ ಒಂದು ವಾರ ಕಠಿಣ ಲಾಕ್ಡೌನ್ ಇದ್ದರೆ ಒಳ್ಳೆಯದು: ಸಚಿವೆ ಶಶಿಕಲಾ ಜೊಲ್ಲೆ - ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಪ್ರಕರಣ
ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಕೊರೊನಾ ಚೈನ್ ಕಟ್ ಮಾಡಲು, ಜೀವ ಹಾನಿ ತಡೆಯಲು ಇನ್ನೂಂದು ವಾರ ಕಠಿಣ ಲಾಕ್ಡೌನ್ ಅವಶ್ಯಕತೆ ಇದೆ. ಇಂದು ಮುಖ್ಯಮಂತ್ರಿಗಳು ಹಿರಿಯ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.