ಶ್ರೀಗಳ ಕೊನೆ ಗಳಿಗೆಯಲ್ಲಿ ಜೊತೆಗಿದ್ದೆ, ತುಂಬಾ ನೋವಾಗಿದೆ - ಸದಾನಂದಗೌಡ - ವಿಶ್ವೇಶ ತೀರ್ಥ ಸ್ವಾಮಿಗಳ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡ ಸದಾನಂದಗೌಡ
ಶ್ರೀಗಳ ಕೊನೆ ಗಳಿಗೆಯಲ್ಲಿ ಜೊತೆಗಿದ್ದೆ, ತುಂಬಾ ನೋವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ತೆರಳುವ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶ್ರೀಗಳ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ, ಸಾಮಾಜಿಕ ಪರಿವರ್ತಕ, ಧಾರ್ಮಿಕ ಮುಖಂಡರನ್ನ ಕಳೆದುಕೊಂಡಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದ್ರು.