ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಸ್ಫೋಟ... ವಿಶೇಷ ವರದಿ - ಕರ್ನಾಟಕ ರಾಜಕೀಯ ಸುದ್ದಿ
ಗದ್ದುಗೆ ಗುದ್ದಾಟ ಕರ್ನಾಟಕ ರಾಜಕಾರಣದಲ್ಲಿ ಹೊಸ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದವರ ಪೈಕಿ ಏಳು ಶಾಸಕರು ಇತ್ತೀಚೆಗೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಸಿಎಂ ಯಡಿಯೂರಪ್ಪ ಅವ್ರಿಗೆ ಖಾತೆಗಳನ್ನು ಹಂಚಿ ತಲೆಭಾರ ಕಡಿಮೆ ಮಾಡುವ ಕೆಲಸ ಮಾಡಿದರು. ಆದ್ರೆ, ಹೊಸ ಸಚಿವರು ತಮಗೆ ಸಿಕ್ಕ ಖಾತೆಗಳಿಂದ ತೃಪ್ತರಾಗಿಲ್ಲ. ಅವರೀಗ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ, ಸಚಿವ ಎಂಟಿಬಿ ನಾಗರಾಜ್, ಅಬಕಾರಿ ಖಾತೆಯಿಂದ ನಾನೇನು ಮಾಡಲಿ ಎಂದು ಕೇಳೇ ಬಿಟ್ಟರು. ಇ ಕುರಿತು ಒಂದು ಸ್ಟೋರಿ ಇಲ್ಲಿದೆ.