ಸಚಿವ ಡಾ.ಕೆ. ಸುಧಾಕರ್ ಕುಟುಂಬಸ್ಥರಿಗೆ ಸೋಂಕು: ಅಭಿಮಾನಿಗಳಿಂದ ವಿಶೇಷ ಪೂಜೆ
ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ತಂದೆ ಸೇರಿದಂತೆ ಪತ್ನಿ, ಮಗಳು ಹಾಗೂ ಮನೆಗೆಲಸಗಾರನಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸಚಿವ ಸುಧಾಕರ್ ಅವರು ಟ್ವೀಟ್ ಮೂಲಕ ಇದನ್ನು ಖಚಿತ ಪಡಿಸಿದ್ದು, ದೇವರಲ್ಲಿ ಪ್ರಾರ್ಥಿಸುವಂತೆ ಅಭಿಮಾನಿಗಳಿಗೆ ಕರೆಕೊಟ್ಟಿದ್ದರು. ಹಾಗಾಗಿ ಇಂದು ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಅವರ ಅಭಿಮಾನಿಗಳು ದೇವಸ್ಥಾನ ಸೇರಿದಂತೆ ಚರ್ಚ್ ,ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಆದಷ್ಟು ಬೇಗ ಸಚಿವರ ಕುಟುಂಬಸ್ಥರು ಸೋಂಕಿನಿಂದ ಗುಣಮುಖರಾಗಲಿ ಎಂದು ಬೇಡಿಕೊಂಡರು. ಇನ್ನೂ ಸಚಿವರ ಮನೆ ದೇವರಾದ ದೊಡ್ಡಪೈಲಗುರ್ಕಿ ಚೆನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಅರ್ಚನೆ, ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.