'ಏನಿದೇ ಸಿಡಿ ವಿಚಾರ, ಯಾಕೇ ಕೆಣುಕುತ್ತಿದ್ದೀರಾ.. ನಮ್ಗಿಂತ ಎಲ್ಲ ನಿಮ್ಗೇ ಗೊತ್ತು..' - ಸಿಡಿ ವಿಚಾರವಾಗಿ ಸಚಿವ ನಾರಾಯಣ ಗೌಡ ಹೇಳಿಕೆ
ಮಂಡ್ಯ : ಏನಿದೇ ಸಿಡಿ ವಿಚಾರ, ಯಾಕೇ ಕೆಣುಕುತ್ತಿದ್ದೀರಾ.. ಈಗ ಆ ಸಿಡಿ ಪ್ರಕರಣ ಯಾವುದೇ ತಿರುವು ಕಂಡಿಲ್ಲ. ಎಲ್ಲವೂ ನಾರ್ಮಲ್ ಆಗಿದೆ. ಮುಂದಿನ ದಿನಗಳಲ್ಲಿ ತನಿಖೆ ಬಳಿಕ ಎಲ್ಲ ತಿಳಿಯುತ್ತದೆ. ಅಲ್ಲಿಯವರೆಗೂ ಕಾಯಬೇಕು. ಬಳಿಕ ಯಾರ ತಪ್ಪು ಇದೆ ಅಂತ ತಿಳಿಯಲಿದೆ ಎಂದು ಸಿಡಿ ಪ್ರಕರಣದ ಬಗೆಗೆ ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಪ್ರತಿಕ್ರಿಯಿಸಿದರು.